ಶಾವಾತ್ಮ ಪದಗಳು

ಕವಿತೆ ಮಡಿಕೆಯಡಿಯ ಬೆಳಕು ಶಾಂತಿವಾಸು ಮಡಚಿಡು ಮಡಿಕೆಯಾಗಿ…ಅಣುವು ಕೂಡಾ ಅನುವಾಗೆರಗಿದ ಅನುಭವವ ನಾಳೆಗಾಗಿ…. ಮಡಚಿಡು ಸಂತಸದಿಂದ…ಕದಡಿದ ನಿನ್ನ ಮನದ ಕತ್ತಲೆಯೊಳು, ರವಿ ಸಂಚಯಿಸಿದ್ದನ್ನು ಜತನದಿಂದ…. ಮಡಚಿಡು ಇಂದಿನ ನಿರಾಶೆಯ…ಇರಲದರಲಿ, ದುಃಖ ಅಲ್ಪಾಯುವೆಂದು ಸಾರುವ ಸಂದೇಶದ ಸದಾಶಯ… ಮಡಚಿಡು ಸೋಲುಗಳ ಸರಮಾಲೆ…ತೆರೆದು ನೋಡಲದುವೇ ಏಣಿ ಗೆಲುವಿಗೆ, ಗಟ್ಟಿಹೆಜ್ಜೆ ಇಟ್ಟು ಏರಲು ಮೇಲೆ ಮೇಲೆ… ಮಡಚಿಡು ಈಜಿ ಗೆದ್ದ ಜಯವನ್ನು …ವಿಧಿಯಾಟದ ದಾಳವಾಗುರುಳುವಾಗ ನೀನೇ ಅರಿಯಲು ನಿನ್ನಿರಿಮೆಯನ್ನು.. ಮಡಚಿಡು ಅಡಿಯಲ್ಲಿ ಸೋಲುಗಳ, ಸದಾ ಸುಳಿದಾಡಿ ಸೊಲ್ಲೆತ್ತದಂತೆ…ಎಲ್ಲಕ್ಕಿಂತ ಮೇಲೆ ಮಡಚಿಡು, ಸೋಲನ್ನು … Continue reading ಶಾವಾತ್ಮ ಪದಗಳು